Sunday, 17 July 2011

ಮಲ್ನಾಡ ಹುಡುಗಿ ಹೇಳು ಮಲೆನಾಡ ಕಥೆ....
  ಮಲೆನಾಡು ಮಳೆಗಳ ನಾಡು. ಹಚ್ಚ ಹಸುರಿನ ಮಲೆನಾಡನ್ನು ನೋಡಲು ಎರಡು ಕಣ್ಣು ಸಾಲದು.
ಮಲೆನಾಡಿನ ಮಳೆಗಾಲದ ಆ ಸೊಬಗೆ ಬೇರೆ.ಭೂ ತಾಯಿ ಹಚ್ಚ ಹಸಿರ ಝರಿ ಸೀರೆ ಉಟ್ಟು ಖುಷಿಯಿಂದ ನಲಿದಾಡುವ ಆ ಪರಿ ಮನೋಹರ ವಾದದ್ದು.
ಎಲ್ಲೆಲ್ಲೂ ತುಂಬಿ ಹರಿವ ಹಳ್ಳ-ಕೊಳ್ಳಗಳ ಭೋರ್ ಗರೆವ ಜಲಪಾತಗಳು,ಮನಸ್ಸನ್ನು ಮುದ ಗೊಳಿಸುತ್ತವೆ.

ನಾನು ಕೂಡಾ ಮಲ್ನಾಡ ಹುಡುಗಿ ಮಳೆಗಾಲದ ಎಲ್ಲಾ ಅನುಭವ ನನಗಿದೆ.ಸ್ಕೂಲ್ ಗೆ ಹೊಗೊವಾಗಾ ಮಳೆ ಬರುತ್ತೆ ಅಂತಾ ಗೊತ್ತಿದ್ದರೂ ಬೇಕಂತ ಛರ್ತ್ರಿ ತಗೆದುಕೊಳ್ಳದೆ  ಹೊಗೊದು ಕಾರಣ ಮಳೆಲಿ ನೆನೆದು ಆಟ ಆಡೋ ಹುಚ್ಚು ಆಸೆ ಮತ್ತು ಖುಷಿ.ಸ್ಕೂಲ್ ನಿಂದಾ ಮನೆಗೆ ಕೇವಲ ೧೦ ನಿಮಿಷಾ ಸಾಕು, ಮನೆಲ್ ಹೆಳ್ತಾ ಇದ್ದರು ಜಾರ್ ಬಿದ್ದರೆ ಮನೆ ಯಾಕ್ ಇಸ್ಟ್ ಲೇಟ್  ಆಗ್ ಬರ್ತಿರಾ ಅಂತಾ. ಪಾಪಾ ಅವರಿಗೇನ್ ಗೊತ್ತು ನಮ್ ಕೆಲ್ಸಾಗಳು? ಸ್ನೇಹಿತರೆಲ್ಲ ಸೇರಿ ರಸ್ತೆಲಿ ಹರಿತಿರೊ ಕೆಂಪು ಬಣ್ನದ ನೀರಲ್ಲಿ ಆಟಾ ಆಡತಾ, ಸಣ್ಣದಾಗಿ ಜಗಳಾ ಆಡತಾ,ನೀರನ್ನು ಎರಚತಾ ಮನೆಗೆ ಬರೊಕೆ ಒಂದು ತಾಸು ಕನಿಷ್ಟ ಬೇಕಾಗತಿತ್ತು.

ದಾರಿ ಮದ್ಯ ದ್ಲ್ಲೇನಾದ್ರೂ ವಿಚಿತ್ರ ವದದೆನದರೂ ಕಂಡ್ರೆ ಮುಗಿದೇ ಹೊಯ್ತು ಮನೆ ಇನ್ದಾ ಯಾರಾದ್ರೂ ನಮ್ ಹುಕೋಂಡ್ ಬರ್ಬೇಕು ಅಲ್ಲಿ ತನಕಾ ನಮಗೆ ಮನೆ ನೆನೆಪೇ ಆಗ್ತಿರ್ಲಿಲ್ಲಾ. ಅವೆಲ್ಲಾ ಮರೆಯಲಾಗದ ಸಿಹಿ ನೆನಪುಗಳು.

ಮಲ್ನಾಡಲ್ಲಿ ಹುಟ್ಟಿ ಆ ಅನುಭವ ಆಗೋಕು ಪುಣ್ಯಾ ಬೇಕು.
ಸ್ನೇಹಿತರೆ, ಈಗಾ ನನಗೆ ಎಗ್ಸಾಮ್ ಸಮಯ ಅದಕೆ ಮಲೆನಾಡ ಮಳೆಗಾಲವನ್ನಾ ಸಣ್ನದಾಗಿ ಹೇಳಿದ್ದೇನೆ ಇನ್ನಸ್ಟು ಹೇಳುವ ಆಸೆ ಇದೆ   ಸಮಯ ಸಿಕ್ಕಾಗ. ಒಕೆ.....