Tuesday, 12 July 2011

ಮಾರಿಕಾಂಬಾ ದೇವಿ ಜಾತ್ರೆ :

      ಮಾರಿಕಾಂಬಾ ದೇವಿ ಜಾತ್ರೆ :


ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಗಳಲ್ಲೊಂದಾದ ಉತ್ತರ ಕನ್ನಡ(ಕಾರವಾರ) ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಬರುವ ಶಿರಸಿ ತಾಲೂಕಿನ ಗ್ರಾಮದೇವಿಯಾದ ಶ್ರೀ ಶಿರಸಿ ಮಾರಿಕಾಂಬಾ ದೇವಿ ಜಾತ್ರೆಯು ಇದೇ ಬರುವ ಫೆಬ್ರುವರಿ 23 ರಿಂದ ಮಾರ್ಚ 3ರ ವರೆಗೆ 9 ದಿನಗಳ ಕಾಲ ಲೋಕಕಲ್ಯಾಣಾರ್ಥವಾಗಿ ವಿಜೃಂಬಣೆಯಿಂದ ಜರುಗಲಿದೆ. ಶಿರಸಿಯ ಗ್ರಾಮದೇವಿಯಾದರೂ ನಾಡಿನಾದ್ಯಂತ ನೆಲೆಸಿರುವ ತನ್ನ ಭಕ್ತರ ಮನೋಭಿಲಾಷೆಗಳನ್ನು ಈಡೇರಿಸುವ ನಾಡದೇವಿಯಾಗಿರುತ್ತಾಳೆ.  ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಯು ರಾಜ್ಯದ ಆಕರ್ಷಣೀಯ ಬಿಂದು. ವಿಶೇಷ ದ್ದೀಪಾಲಂಕೃತ ಜಾತ್ರಾ ಗದ್ದುಗೆಯ ಮಂಟಪದಲ್ಲಿ ದೇವಿಯ ಪ್ರತಿಷ್ಠಾಪನೆ, ಪೂಜೆ-ಪುನಸ್ಕಾರಗಳು, ಭಕ್ತಸಾಗರ ಆಸ್ತಿಕ ಭಕ್ತಾದಿಗಳನ್ನಾಕರ್ಷಿಸಿದರೇ, ನಾನಾ ವಿಧದ ಮನೊರಂಜಿಸುವ ಆಟಗಳು, ನಾಟಕಗಳು, ತಿಂಡಿ-ತಿನಿಸುಗಳ ಅಂಗಡಿಗಳು ಹಾಗೂ ಮಾರಾಟಕ್ಕಾಗಿ ಸ್ಥಾಪಿಸಲ್ಪಡುವ ಇನ್ನಿತರ ಮಳಿಗೆಗಳು ಎಲ್ಲ ವಯೋಮಾನದವರನ್ನೂ, ಎಲ್ಲ ವರ್ಗದವರನ್ನೂ ಹರ್ಷಿತಗೊಳಿಸುವುದರಿಂದ ಈ ಜಾತ್ರೆ  ನಾಡಿನ ಪ್ರಸಿದ್ಧ ಜಾತ್ರೆಯಾಗಿ ರೂಪುಗೊಂಡಿದೆ.

No comments:

Post a Comment