Friday, 17 June 2011

ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ.......

ಈ ಸಾಲನ್ನು ನೋಡಿದಾಗ ಒಮ್ಮೆ ಮನಸಿನಲ್ಲಿ ವಿದ್ಯುತ್ ಸಂಚಾರವಾದಂತೆ ಅನಿಸಬಹುದು. ಆದರೆ ಎದು ಅದಲ್ಲ. ನಮ್ಮ ಭವಿಷ್ಯದ ಕುರಿತು ಒಂದು ಚಿಕ್ಕ ನೋಟ.
 ನಾವು ದಿನಾ ಬೆಳೆಗ್ಗೆ ಕಾಲೇಜಿಗೆ  ಬರ್ತಿವಿ , ಸಂಜೆ ಮನೆಗ ಹೋಗ್ತಿವಿ , ಆದರೆ ಬರೋವಾಗಾ ,ಬಂದಾಗ ,ಹೋಗುವಾಗ ಏನ್ ಮಾಡ್ತಿವಿ ಯಾಕ್ ಮಾಡ್ತಿವಿ ಅನ್ನೋದು ಗೊತ್ತೆ ಎರಲ್ಲ. ಯಾರನ್ನೋ ಮೆಚ್ಸೋಕೆ ,ಯಾರನ್ನೋ ಖುಶಿ ಪಡ್ಸೋಕೆ ,ಯಾರ ಮುಂದೋ ಹೀರೋ ಆಗೋಕೆ ಪ್ರಯತ್ನ ಪಡ್ತಿವಿ ಅದೆಲ್ಲಾ ಬೇಕಾ?
 ನಮ್ಮ ಕಡೆ ಕಣ್ಣೆತ್ತಿಯೂ ನೋಡದ ಈ ‘ಯಾರೋ’ಗಳ ಬಗ್ಗೆ ಇಷ್ಟೆಲ್ಲ ಆಸಕ್ತಿ ವಹಿಸೋ ನಾವು ದಿನದಲ್ಲಿ ಒಮ್ಮೆ ಯಾದರೂ ಏನ್ ಮಾಡಿದ್ರೂ ಕ್ಷಮಿಸೋ ,ನಮಗೆ ಇಲ್ಲದಿದ್ರೂ ಪರವಾಗಿಲ್ಲ ನನ್ನ ಮಗನಿಗೆ/ಮಗ?ಳಿಗೆ ಅಂತ ಕನಸುಗಳನ್ನು ಕಟ್ಕೊಂಡಿರೋ ಅಪ್ಪ-ಅಮ್ಮನ ಜ್ಞಾಪಿಸ್ಕೋತಿವಾ?
ವಿಷಯ ದಾರಿತಪ್ತಾ ಇದೆ ಅಂತ ಅನ್ನಿಸ್ತಿದೆ ಅಲ್ವಾ? ಹಾಗಾದ್ರೆ ನೇರವಾಗಿ ವಿಷಯಕ್ಕೆ ಬರೋಣ.
ನಾವು ಈಗ ಸ್ನಾತಕೋತ್ತರ ವಿದ್ಯಾಥಿ೯ಗಳು ಮುಂದೆ ಜೀವನವನ್ನು ಎದುರಿಸುವ ದಾರಿಯಲ್ಲಿದ್ದೆವೆ.ನಮಗೆ ಅನೇಕೆ ಕಡೆಗಳಿಂದ , ಅನೇಕ ವಿಧಗಳಿಂದ ಅಗಾಧವಾದ ಪೈಪೋಟಿ ಇದೆ. ಇಂದು ೯೫% ಕ್ಕೂ ಹೆಚ್ಚು ಅಂಕಗಳಿಸಿದರು ಲಂಚನೀಡುವುದು ಇನ್ ಫ್ಲೂಯನ್ಸ್ ಮಾಡುವುದು ಸಾಮಾನ್ಯವಾಗಿದೆ. ಅದೇ ಬೇಸರದಲ್ಲಿ ಬಿಸಿ ರಕ್ತದ ಯುವಕರು ನಕ್ಸಲೈಟ್ಗಳೊ , ಭಯೀತ್ಪಾದಕರೋ ಆಗದಿದ್ದರೆ ಅದು ನಮ್ಮ ಪುಣ್ಯ.
‘ಧಾನೇ ಧಾನೇಪೆ ಲಿಖಾ ಹೈ ಖಾನೆ ವಾಲೆಕಾ ನಾಮ್, ಗೋಲಿ,ಗೋಲಿಪೆ ಲಿಖಾ ಹೈ ಮರನೆ ವಾಲೆಕಾ ನಾಮ್’ ಅನ್ನೋ ಮಾತು ಸತ್ಯ. ಆ ದೇವರು ಯಾರ ,ಯಾರ ಜೀವನಾನಾ ಎಲ್ಲೆಲ್ಲಿ,ಹೇಗ್ ಹೆಗೆ ಬರೆದಿಟ್ಟಿದ್ದಾನೋ ಗೊತ್ತಿಲ್ಲ. ಆದರೆ ಒಂದು ಮಾತಂತು ನಿಜ ‘ಒಂದೇ ಹನಿಯು ಎಲ್ಲ ಚಿಪ್ಪುಗಳಲ್ಲಿ ಮುತ್ತಾಗುವುದೊ,ಎಲ್ಲ ಹನಿಗಳು ಒಂದೇ ಚಿಪ್ಪಿನಲ್ಲಿ ಮುತ್ತಾಗುವುದು ಅಸಾಧ್ಯವಾಗಿದೆ.
ಯಾವುದೋ ಮೋಡ ಎಲ್ಲಿಂದಲೋ ಬ್ಂದು ಮಳೆ ಸುರಿದು , ಎಲ್ಲಿಯೋ ಇರುವ ಚಿಪ್ಪಿನಲ್ಲಿ ಮುತ್ತಾಗುವುದು ಎಂತಹ ವಿಪಯಾ೯ಸ . ಅದೇ ರೀತಿಯಾವುದೋ ತಾಯಿಯ ಬಸಿರಲ್ಲಿ ಹುಟ್ಟಿ ಎಲ್ಲಿಯೋ ಬೆಳೆದು , ಎಲ್ಲಿಯೀ ಜೀವನ ಸಾಗಿಸುವ ಮಕ್ಕಳನ್ನು ತಂದೆ - ತಾಯಿ ವಷ೯ಕ್ಕೆ ಒಮ್ಮೆಯೂ ನೋಡಲು ಸಾದ್ಯವಾಗದ ಕಾಲ ಇದಾಗಿದೆ. ನಾವು ಎಲ್ಲಿಯೋ ಹಿಟ್ಟಿ ,ಎಲ್ಲಿಯೋ ಬೆಳೆದು ಇಲ್ಲಿ ಬಂದು ಸೇರಿದ್ದೆವೆ. ನಮಗಾಗಿ ಯಾವ ಸ್ನೇಹ , ಯಾವ ಪ್ರೀತಿ , ಯಾವ ಉದ್ಯೋಗ ಕಾದಿದೆಯೋ ಕಾದು ನೋಡ ಬೇಕಿದೆ. ಯುದ್ಧಕ್ಕೆ ಸಾವಿರ ಸೈನಿಕರು ನುಗ್ಗಿದರೆ ವಿಜಯ ಪತಾಕೆ ಹಾರಿಸುವವ ಒಬ್ಬ ಸೈನಿಕ ಮಾತ್ರಾ . ಅವನ ಸಹೋದ್ಯೋಗಿಗಳು ಒಬ್ಬೊಬ್ಬರು ಒಂದೊಂದು ಮೆಟ್ಟಿಲುಗಳಾಗಿ ಸಹಕರಿಸುತ್ತಾರೆ.

ಎಲ್ಲರು ತಮ್ಮ,ತಮ್ಮ ಗುರಿಯನ್ನು ನಿದಿ೯ಷ್ಟ ಪಡಿಸಿಕೋಂಡಿರಬಹುದು. ಆದರೆ ಆ ಗುರಿ ಎಷ್ಟು ಸೂಕ್ತ? ನಮ್ಮಿಂದ ಅದನ್ನು ತಲುಪಲು ಎಷ್ಟು ಸಾದ್ಯ ,ಆ ನಿಟ್ಟಿನಲ್ಲಿ ನಮ್ಮ ಪುಟ್ಟ ಹೆಜ್ಜೆಗಳನ್ನು ಎಷ್ಟು ಬಲವಾಗಿ ಇಟ್ಟಿದ್ದೇವೆ ಎಂಬುದನ್ನೊಮ್ಮೆ ಯೋಚಿಸಿ ನೋಡಿ . ಯಾರ ಜೀವನ ಎಲ್ಲಿದೆ,ಹೇಗಿದೆ ಅನ್ನೋದು ಅವರ ಕೈಯಲ್ಲೇ ಇದೆ. ಜೀವನದಲ್ಲಿ ಮುನ್ನುಗ್ಗುವುದನ್ನು ಚೆನ್ನಾಗಿ ತಿಳಿದಿರಬೇಕು. ಯಾರನನ್ನೂ ಅವಕಾಶಗಳು ಹುಡುಕಿಕೊಂಡು ಬರೋದಿಲ್ಲ, ನಾವೇ ಹುಡುಕಬೇಕು. ಇಲ್ಲವೇ ಸೃಷ್ಟಿಸಬೇಕು. ಎಲ್ಲರೂ ಬೇರೆಯವರನ್ನು ತುಳಿದು ಮೇಲೇರುವ ಪ್ರಯತ್ನ ಪಡ್ತಾರೆ ಆದರೆ ನಾವು ಆ ತಪ್ಪನ್ನು ಮಾಡ್ದೆ ನಮ್ಮ ಗುರಿ ಸಾಧಿಸಬೇಕು.

Tuesday, 7 June 2011

ಆಯ್ಕೆ ನಿನ್ನದಾಗಲಿ:

ಈಗಸ್ಟೇ ಬಂದ ರಿಸಲ್ಟುಗಳು, ಮನೆಯಲ್ಲಿನ ಬೈಗುಳಗಳು, ಈ ಕಡೆ ಬಾ, ಈ ಕಡೆ ಬಾ ಎಂದು ಕೈ ಬೀಸಿ ಕರೆಯುತ್ತಿರುವ ಕೋಸು೯ಗಳು,ಯಾವಕಡೆ ಹೊಗಲಿ ಎಂದು ಹೊಯ್ದಾಡುತ್ತಿರುವ ಮನಸ್ಸುಗಳು......ಸ್ನೇಹಿತರೆ ಎಸ್.ಎಸ್.ಎಲ್.ಸಿ ಮ್ಕತ್ತು ಪಿಯುಸಿ ರಿಸಲ್ಟ್ ಬಂದ ಕೂಡಲೆ ಇದು ಎಲ್ಲರಿಗೂ ಇರೋ ಸಮಸ್ಯೆ. ಆದರೆ ನೀವು ಯಾವ ಕೋಸ೯ನ ಆಯ್ಕೆ ಮಾಡ್ಕೋಬೇಕು ಅನ್ನೊದು ನಿಮ್ಮ ನಿಧಾ೯ರವಾಗ ಬೇಕು.ಅದಕ್ಕೂ ಮೊದಲು ಎಲ್ಲಾ ಕೋಸ೯ಗಳ ಬಗ್ಗೆ ಸರಿಯಾಗಿ ಮಾಹಿತಿ ತಿಳ್ಕೊಂಡು ನಂತರ ಬಲ್ಲವರ ಅಭಿಪ್ರಾಯವನ್ನು ಕೇಳಿ ನಿಮ್ಮದೇ ಆದ ತೀಮಾ೯ನ ಮಾಡೊದು ಒಳ್ಳೆದು.


ಹಲವಾರು ಜನ ಹಲವಾರು ಹೇಳ್ತಾರೆ. ನೀನು ಅದನ್ ಮಾಡು,ಇದನ್ ಮಾಡು, ಅದು ಚೆನ್ನಾಗಿಲ್ಲಾ , ಇದು ಚೆನ್ನಾಗಿಲ್ಲಾ ಅಂತಾ. ಅದರಲ್ಲಿ ಕೆಲವರು ಪೂಣ೯ ತಿಳ್ಕೊಳ್ಳದೆ ಅಲ್ಲೊಂಚುರು ಇಲ್ಲೊಂಚುರು ಮಾಹಿತಿ ಕಲೆಹಾಕಿ ಅಂದರೆ ಅಧ೯೦ಭಧ೯
ತಿಳ್ಕೊಂಡು ಅದನ್ನ ನಮ್ಮ ತಲೆಗೆ ತುಂಬೊ ಪ್ರಯತ್ನಾ ಮಾಡ್ತಾರೆ. ಈ ಸಂದಭ೯ದಲ್ಲಿ ಜಾಣ್ಮೆಯಿಂದ ಮುಂದುವರಿಯೊದು ಬುದ್ಧಿವಂತನ ಲಕ್ಷಣ.

ಈ ಟೈಂನಲ್ಲಿ ಎಲ್ಲರೂ ಸಜೇಶನ್ ಕೊಡೊರೆ ಆಗಿರುತ್ತಾರೆ. ಆದರೆ ತೀಮಾ೯ನ ಮಾತ್ರ ನಮ್ಮದಾಗಿರ ಬೇಕು.ಎಲ್ಲಾ ಕೋಸ೯ಗಳ ಬಗ್ಗೆ ತಿಳ್ಕೊಂಡು ಯಾವುದಕ್ಕೆ ನಾನ್ ಹೋದ್ರೆ ಅದರಲ್ಲಿ ಅಂಕಗಳಿಸಬಹುದು,ಹಾಗೆ ಮುಂದೆ ಕೆರಿಯರ್ ಹೇಗಿರುತ್ತೆ,ಕೆಲಸ ಸಿಗತ್ತಾ,ಸಿಕ್ಕಿದ ಮೇಲೆ ಸ್ಯಾಲರಿ ಹೇಗಿರಬಹುದು ಎಂಬ ಎಲ್ಲಾ ವಿಷಯಾನೂ ಅಗತ್ಯವಾಗಿರತ್ತೆ.
 ಮನೆಯಲ್ಲಿ ಒತ್ತಾಯ ಮಾಡಿದ್ರು ಅಂತ ಅವರಿಷ್ಟಾಪದೋ ಕಡೆ ಅಥವಾ ಅವರು ಇಸ್ಟಾಪಡೊದನ್ನಾ ಓದೋಕೆ ಹೊಗಿ ಅದರಲ್ಲಿ ಡುಮುಕಿ ಹೊಡಿತಾ,ವಿಷಯ ತಲೆಗ್ ಹತ್ತದೆ ವಿಫಲನಾದ್ರೆ ಅದರಲ್ಲಿ ಅಥಾ೯ ಇರಲ್ಲಿ.ನಿನಗೆನ್ ಬೇಕೋ ,ನಿನ್ ಹತ್ರಾ ಎನಾಗತ್ತೋ ಅದನ್ ನಿನ್ ಮಾಡು.ಎಲ್ಲರು ಡಾಕ್ಟರ್ ,ಎಂಜಿನೀಯರ್ ಆಗೋಕ್ ಹೊದ್ರೆ ಉಳಿದದ್ ಆಗೊದ್ ಯಾರು ಅಲ್ವಾ? ನೀನ್ ಇಸ್ಟಾ ಪತ್ತಿರೊದನ್ನಾ ಧೈಯ೯ , ಆತ್ಮವಿಶ್ವಾಸದಿಂದ ಮಾಡು , ಆಗ ಜೀವವನದಲ್ಲಿ ನೀನು ಆಯ್ಕೆ ಮಾಡಿಕೊಡ ಅಥವಾ ನೀನು ಬಯಸಿದ ಬದುಕು ನಿನ್ನದಾಗತ್ತೆ..........